ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು

ಬಳ್ಳಗಳಿಂದ ಮುತ್ತು ರತ್ನಗಳನ್ನು ಅಳೆದ ಕರುನಾಡಿನ ಸಿರಿಭಾಷೆ – ಮಾತೃಭಾಷೆ ಕನ್ನಡ. ಭಾವನೆಗಳು ಮಿಡಿಯುವ ಭಾಷೆ ಕನ್ನಡ. ಆದಿಕವಿಯ ಹಳೆಕನ್ನಡ, ಶರಣರ ನಡುಗನ್ನಡ ನಂತರದ ಹೊಸಗನ್ನಡ ಹೀಗೆ ಭವ್ಯ ಸಾಹಿತ್ಯ ಪರಂಪರೆ ಕನ್ನಡ ಸಾಹಿತ್ಯದಲ್ಲಿ ಬೆಳೆಯುತ್ತಲೇ ಇದೆ. ಕನ್ನಡದ ಅಕ್ಷರಗಳು ಬಳ್ಳಿಯನೇರುವ ಹೂ-ಕಾಯಿ-ಹಣ್ಣುಗಳಂತೆ ಅತ್ಯಂತ ಸುಂದರ.
ಶಾರದೆಯ ಮಡಿಲಲ್ಲಿ ಬೆಳೆದ ನಮ್ಮೀ ಸಂಸ್ಥೆ ಕನ್ನಡದ ಒಡಲು ಎಂದರೆ ಅತಿಶಯೋಕ್ತಿಯಲ್ಲ. ಕಬ್ಬಿಗನ ಮನದ ಆಳವನ್ನು ದಾಟಿ ಅಂತರಂಗದಲ್ಲಿ ಅಡಕವಾಗಿರುವ ಕನ್ನಡದ ಕಂಪನ್ನು ಹೊರಗೆಡುವಲ್ಲಿ ಸದಾ ಕ್ರೀಯಾಶೀಲ ವೇದಿಕೆ ನಮ್ಮ ಶಾರದ ವಿದ್ಯಾನಿಕೇತನ ಪಿ.ಯು.ಕಾಲೇಜು. ಕರಾವಳಿಯ ಬಿರಬಿಸಿಲಿನ ಮಧ್ಯೆ, ಇತಿಹಾಸದ ಕುರುಹು ಹೊಂದಿರುವ ಈ ತುಳುನಾಡಿನ ಸೀಮೆಯಲ್ಲಿ ಅರಳಿದ ಈ ಶಾರದೆಯ ಸಂಸ್ಥೆಯಲ್ಲಿ ಕನ್ನಡವನ್ನು ಸದಾ ನವೀರತೆ, ಹೊಸತನ, ಹೊಳಪಿನಿಂದ ಪರಿಶೋಭಿಸುತ್ತಿದ್ದಾಳೆ.

Faculties

Mr. Sathish A