ವಿದ್ಯಾಥರ್ಿಗಳು ಸಮಾಜವನ್ನು ಬೆಳಗುವ ದೀವಿಗೆಗಳಾಗಲಿ- ಪ್ರೊ.ಎಂ.ಬಿ. ಪುರಾಣಿಕ್

ದೇವಿನಗರ, ಸೆ 27: ಪರಶುರಾಮನ ಸೃಷ್ಟಿಯ ಈ ಕರಾವಳಿಯಲ್ಲಿ ನವರಾತ್ರಿ ಹಬ್ಬಕ್ಕೆ ತನ್ನದೇ ಆದ ವಿಶೇಷವಾದ ಮಹತ್ವವಿದೆ. ಜಗನ್ಮಾತೆಯಾದ ದೇವಿ, ವಿದ್ಯಾಧಿ ದೇವತೆ ಶಾರದೆಯಾಗಿ, ಸಕಲ ಐಶ್ವರ್ಯವನ್ನು ಕರುಣಿಸಿ ಲಕ್ಷ್ಮಿಯಾಗಿ, ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸುವ ದುಗರ್ೆಯಾಗಿ ಈ ನವರಾತ್ರಿ ಪರ್ವದಲ್ಲಿ ಪೂಜೆಗೊಳ್ಳುತ್ತಿದ್ದಾಳೆ. ಇಂತಹ ಈ ಪುಣ್ಯಕಾಲದಲ್ಲಿ ಪ್ರತಿಯೊಬ್ಬರ ಅಂತರ್ಯದಲ್ಲಿ ನೆಲೆಸಿರುವ ಆ ದೇವಿಯ ಪೂಜೆಯಿಂದ ನಮ್ಮ ಮನದಾಳದ ಅಭೀಷ್ಠೆಗಳು ನೆರವೇರಿ ನಮ್ಮೆಲ್ಲರ ಉತ್ತರೋತ್ತರ ಅಭಿವೃದ್ದಿಯಾಗಲಿ ಎಂದು 27/09/2017 ರಂದು ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ.ಎಂ.ಬಿ. ಪುರಾಣಿಕ್ ಹೇಳಿದರು.
ದೇಶ ವಿದೇಶಗಳಿಂದ ಆಗಮಿಸಿ ಶಾರದಾವಿದ್ಯಾನಿಕೇತನ ಗುರುಕುಲದಲ್ಲಿ ಕಲಿಯುತ್ತಿರುವ ವಿದ್ಯಾಥರ್ಿಗಳಿಗೆ ಆಯೋಜಿಸಿದ ನವರಾತ್ರಿಯ ವಿಷೇಶ ಕಾರ್ಯಕ್ರಮವಾದ ಶಾರದಾ ಪೂಜೆಯಲ್ಲಿ ವಿದ್ಯಾಥರ್ಿಗಳಿಂದ ಹಾಗೂ ಅಧ್ಯಾಪಕರಿಂದ ಭಜನಾ ಕಾರ್ಯಕ್ರಮ, ಭಗವದ್ಗೀತ ಪಠಣ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾಥರ್ಿಗಳಿಂದ ನೃತ್ಯಭಜನೆ ನೆರವೇರಿತು.
ಶಾಲಾ ಸಂಸ್ಕೃತ ಅಧ್ಯಾಪಕರಾದ ಶುಭಕರ್ ಮತ್ತು ಕೃಷ್ಣಮೂತರ್ಿ ಅರ್ಚಕರಾಗಿ ಅಗ್ನಿ ಹೋತ್ರದ ಮೂಲಕ ಪೂಜೆಯನ್ನು ಪ್ರಾರಂಭಿಸಿ, ಅನಂತರ ಪುಸ್ತಕ ಪೂಜೆ ಮತ್ತು ದೇವಿಗೆ ಅರ್ಚನೆಯನ್ನು ಮಾಡಿ ನೆರೆದವರಿಗೆ ಶ್ರೀ ದೇವಿಯ ಪ್ರಸಾದವನ್ನು ವಿತರಿಸಿದರು.