ವಿದ್ಯಾಥರ್ಿ ಜೀವನದಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು : ಪ್ರೊ. ಎಂ. ಬಿ. ಪುರಾಣಿಕ್

ವಿದ್ಯಾಥರ್ಿಗಳು ತಮ್ಮ ವಿದ್ಯಾಥರ್ಿ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಅಧ್ಯಾತ್ಮಿಕ ಜೀವನಕ್ಕೂ ಮಹತ್ವವನ್ನು ನೀಡಿ, ಸಂಸ್ಕಾರಯುತ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕೆಂದು ಹೇಳಿದರು. ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಲಾದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಇನ್ನೊರ್ವ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಸೀತಾರಾಮ್ ಭಟ್ರವರು ಶಾಲೆಯ ಅಭಿವೃದ್ದಿಯ ಬಗ್ಗೆ ಸಂತಸ ವ್ಯಕ್ತಪಡಿಸಿ, ವಿದ್ಯಾಥರ್ಿಗಳು ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.

ಹಳ ಸಂಭ್ರಮದಿಂದ ಆಯೋಜಿಸಲಾದ ಮೊಸರು ಕುಡಿಕೆ ಉತ್ಸವದಲ್ಲಿ ವಿದ್ಯಾಥರ್ಿನಿಯರಿಂದ ನಾಸಿಕ್ ಬ್ಯಾಂಡ್ ಮತ್ತು ವಿದ್ಯಾಥರ್ಿಗಳಿಂದ ಹುಲಿವೇಷ ಕುಣಿತವು ಮೆರವಣಿಗೆಗೆ ಶೋಭೆಯನ್ನು ನೀಡಿತು. ಕೃಷ್ಣ ಮತ್ತು ರಾಧೆಯ ವೇಷಧರಿಸಿದ ಚಿಣ್ಣರು ಮೆರವಣಿಗೆಯಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದರು. ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳಿಂದ ಕೃಷ್ಣನ ಜೀವನದ ಕುರಿತಾದ ಭಾಷಣ, ಕೃಷ್ಣನ ಜನ್ಮವೃತ್ತಾಂತವನ್ನು ತಿಳಿಸುವ ನೃತ್ಯ ಮತ್ತು ಕೃಷ್ಣನ ಪೂಜೆ ಮತ್ತು ಭಜನಾ ಕಾರ್ಯಕ್ರಮಗಳು ನಡೆದವು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಸೀತರಾಮ ಭಟ್ ಮಡಕೆ ಯನ್ನು ಒಡೆಯುವ ಮೂಲಕ ವಿಟ್ಲ ಪಿಂಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆನಂತರ ವಿದ್ಯಾಥರ್ಿ, ವಿದ್ಯಾಥರ್ಿನಿಯರು ತಮಗೆ ನಿಯೋಜಿಸಿದ್ದ ಅಟ್ಟಣಿಗೆಯಲ್ಲಿ ಮಾನವ ಪಿರಾಮಿಡ್ಗಳನ್ನು ರಚಿಸಿ ಜೋಡಿಸಲ್ಪಟ್ಟ ಮಡಕೆಗಳನ್ನು ಒಡೆದು ಸಂಭ್ರಮೋಲ್ಲಾಸದಿಂದ ಕೃಷ್ಣಜನ್ಮಾಷ್ಟಮಿಯ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸುನಂದಾ ಪುರಾಣಿಕ್ ರವರು ಪಾಲ್ಗೊಂಡಿದ್ದರು. ವಿದ್ಯಾಥರ್ಿಯಾದ ವಿಘ್ನೇಶ್ ಕಾರ್ಯಕ್ರಮವನ್ನು ನಿರೂಪಿಸಿದರು, ಗಣಿತ ಉಪನ್ಯಾಸಕರಾದ ಶಿವಪ್ರಸಾದ್ ಭಟ್ ಸ್ವಾಗತಿಸಿದರು. ವಿದ್ಯಾಥರ್ಿನಿ ಅಂಜಲಿ ವಂದಿಸಿದರು.